“ಮೆಸ್ಸಿ” ಎಐ ಹಾಡು ಕ್ರಿಯೇಟ್ ಮಾಡಿದ ತಂಡದಿಂದ “ಕೊರಗಜ್ಜ” ಚಿತ್ರದ ಶ್ರೇಯ ಘೋಷಾಲ್ ಹಾಡು

ಸುಧೀರ್ ಅತ್ತಾವರ್ ನಿರ್ದೇಶನದ,ಶ್ರೇಯ ಘೋಷಾಲ್ ಹಾಡಿರುವ “ಕೊರಗಜ್ಜ” ಚಿತ್ರದ
ಎರಡನೆಯ ಹಾಡು ಇನ್ನೇನು ಬಿಡುಗಡೆಯ ಆಗುತ್ತಿದೆ ಎನ್ನುವಾಗ ಚಿತ್ರತಂಡ ಮತ್ತೊಂದು ಸೀಕ್ರೆಟ್ ಹೊರಹಾಕಿದೆ.

ಅಂತಾರಾಷ್ಟ್ರೀಯ ಫುಟ್ ಬಾಲ್ ತಾರೆ ಅರ್ಜಂಟೈನ್ ನ “ಲಿಯೊನಲ್ ಮೆಸ್ಸಿ” ಯ ಇತ್ತೀಚಿನ ಭಾರತ ಭೇಟಿಯ ಪ್ರಯಕ್ತ ವಿನ್ಯಾಸಗೊಳಿಸಿದ್ದ
“ಮೈದಾನಂ ಮೀದಾ…ಒಕ್ಕ ವೀರುಡು…” ಎಐ ಹಾಡಿನ ಹಿಂದಿನ ಕರ್ಮಚಾರಿಗಳು ಮತ್ತು‌ ಕ್ರಿಯೇಟಿವ್ ರೂವಾರಿಗಳೇ “ಕೊರಗಜ್ಜ” ಚಿತ್ರದ ಶ್ರೇಯ ಘೋಷಾಲ್ – ಅರ್ಮನ್ ಮಲಿಕ್ ಹಾಡಿದ್ದ ಹಾಡನ್ನು‌ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ತಂತ್ರಜ್ಞಾನದಿಂದ ವಿನೂತನವಾಗಿ ವಿನ್ಯಾಸಗೊಳಿಸಿದೆ. ಸುಧೀರ್ ಅತ್ತಾವರ್ ಬರೆದಿರುವ ಗಾಳಿ ಗಂಧ…ತೀಡಿ ತಂದ …ಸಾಹಿತ್ಯವನ್ನು ದಕ್ಷಿಣ ಭಾರತದ ಖ್ಯಾತ ಗೋಪಿ ಸುಂದರ್ ಮೆಲೋಡಿಯಸ್ ಆಗಿ ಕಂಪೋಸ್ ಮಾಡಿದ್ದಾರೆ.ಹಾಡಿನ ಟ್ರ್ಯಾಕ್ ಕೇಳಿದ ಕೂಡಲೇ ಶ್ರೆಯಾ ಹಾಡಲು ಒಪ್ಪಿಕೊಂಡದ್ದು ಹಾಡಿನ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಇತ್ತೀಚೆಗೆ ಹಾಡಿನ ಸಾಹಿತ್ಯವನ್ನು ಬಿಡುಗಡೆ ಗೊಳಿಸಿದ್ದ ಚಿತ್ರತಂಡ ಈಗ ಈ ಹಾಡಿನ‌ಲ್ಲಿ ಬರುವ ಮುಗ್ಧ ಪ್ರೇಮಿಗಳ
ಸ್ಟನ್ನಿಂಗ್ ಸ್ಟಿಲ್ ನ್ನು ಬಿಡುಗಡೆಗೊಳಸಿ, ಚಿತ್ರಕ್ಕೆ ಹೊಸ ಆಯಾಮ‌‌ ಇರುವುದನ್ನು ತೋರಿಸಿದೆ.
“ಕೊರಗಜ್ಜ” ಚಿತ್ರದಲ್ಲಿ‌ ಪ್ರಣಯದ ಸನ್ನಿವೇಶವೇ ಎಂದು ಕೆಲವರು ಮೂಗು ಮುರಿಯಲೂ ಬಹುದು.ಎಲ್ಲದಕ್ಕೂ ತ್ರಿವಿಕ್ರಮ ನಿರ್ಮಾಣದ, ವಿದ್ಯಾಧರ್ ಕಾರ್ಯಕಾರಿ ನಿರ್ಮಾತ್ರ ರಾಗಿರುವ “ಕೊರಗಜ್ಜ” ಸಿನಿಮಾ ಬಿಡುಗಡೆಗೊಂಡ ನಂತರ ಉತ್ತರ ದೊರಕಲಿದೆ.ಆವರೆಗೆ ತ್ರಿವಿಕ್ರಮ‌ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ ಈ ಚಿತ್ರದ ಹೊಸ ಹೊಸ ಅಪ್ಡೇಟ್ಸ್ ನೋಡಿಕೊಂಡು ಕುತೂಹಲ ಹೆಚ್ಚಿಸಿಕೊಳ್ಳಬೇಕಾಗಿದೆ…! ಅತೀ ವಿನೂತನ ಸ್ಟ್ರಿಂಗ್ಸ್ ಮತ್ತು ವಾದ್ಯಗಳಿಂದ ಟ್ಯೂನ್ ಮಾಡಿರುವ ಎರಡನೆಯ ಹಾಡು ಹೊಸ ಹವಾ ಎಬ್ಬಿಸಲಿದೆ ಅನ್ನುವುದು ನಿಶ್ಚಯ

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments