ನಿದ್ರಾದೇವಿ Next Door” ಚಿತ್ರದ “ಸ್ಲೀಪ್​​ ಲೆಸ್ ಆಂಥೆಮ್” ಹಾಡಿಗೆ ಫಿದಾ ಆದ ಪ್ರೇಕ್ಷಕರು

ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಹಾಗೂ ಸುರಾಗ್ ನಿರ್ದೇಶನದ “ನಿದ್ರಾದೇವಿ next door” ಚಿತ್ರದ “ಸ್ಲೀಪ್ ಲೆಸ್ ಆಂಥೆಮ್” ಹಾಡನ್ನು ಇತ್ತೀಚೆಗೆ ದುನಿಯಾ ವಿಜಯ್ ಕುಮಾರ್ ಅವರು ಅನಾವರಣ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದರು. ಬಿಡುಗಡೆಯಾದ ಕ್ಷಣದಿಂದಲೇ ನಿದ್ದೆ ಬಾರದ ಹಾಡಿಗೆ ಮೆಚ್ಚುಗೆ ವ್ಯಕ್ತಿಯ ಪಜೀತಿಯ ಕುರಿತಾದ ಈ ಹಾಡಿಗೆ‌ ಅಪಾರ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
“ಸರಿಗಮ” ದಲ್ಲೂ ಈ ಹಾಡು ಭಾರೀ ಟ್ರೆಂಡಿಂಗ್ ನಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲೂ “ಸ್ಲೀಪ್ ಲೆಸ್ ಆಂಥೆಮ್” ಸಖತ್ ಸದ್ದು ಮಾಡುತ್ತಿದೆ. ಅಧಿಕ ಸಂಖ್ಯೆಯಲ್ಲಿ ಯುವಜನತೆ ಈ ಹಾಡಿಗೆ ಹುಕ್ ಸ್ಟೆಪ್ ಹಾಕುತ್ತಿರುವುದು ಹಾಡಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ .

Rap ಶೈಲಿಯ ಈ ಗೀತೆಗೆ ಗುಬ್ಬಿ ಮತ್ತು ಸೈಫ್ ಖಾನ್ ಸಾಹಿತ್ಯ ಬರೆದು ಹಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನವಿರುವ “ಸ್ಲಿಪ್ ಲೆಸ್ ಆಂಥೆಮ್” ಸಾಂಗ್​​ಗೆ ನಾಯಕ ಪ್ರವೀರ್ ಶೆಟ್ಟಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ನಿರ್ದೇಶಕ ಸುರಾಗ್ ಅವರ ಪತ್ನಿ ಸಹನ ರಾಮಸ್ವಾಮಿ ಅವರು ಸಹ‌ ನಿರ್ದೇಶಕರಾಗಿ ಸಾಥ್ ಕೊಟ್ಟಿದ್ದಾರೆ. ಭರತ್ ಪರಶುರಾಮ್ ಕ್ಯಾಮರಾ ಹಿಡಿದಿದ್ದಾರೆ.

ನಿದ್ರಾದೇವಿ next door ಸಿನಿಮಾದಲ್ಲಿ ಪ್ರವೀರ್ ಗೆ ಜೋಡಿಯಾಗಿ ರಿಷಿಕಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯಾ ಗೌಡ, ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.

ನಿರ್ಮಾಪಕ ಜಯರಾಮ ದೇವಸಮುದ್ರ ಅವರು ಈ ಹಿಂದೆ ಇದೇ ಬ್ಯಾನರ್ ನಲ್ಲಿ “ರೇವ್ ಪಾರ್ಟಿ” ಮತ್ತು “ಎಂಗೇಜ್ಮೆಂಟ್” ಚಿತ್ರಗಳನ್ನು ನಿರ್ಮಿಸಿದ್ದರು.

ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನವಿರುವ ಬಹು ನಿರೀಕ್ಷಿತ ಈ ಚಿತ್ರಕ್ಕೆ ಅಜಯ್ ಕುಲಕರ್ಣಿ ಛಾಯಾಗ್ರಹಣ, ಉಲ್ಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಸಾಹಸ ನಿರ್ದೇಶನ ಮತ್ತು ಹೇಮಂತ್ ಕುಮಾರ್ ಡಿ ಅವರ ಸಂಕಲನವಿದೆ

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments