ಅದ್ದೂರಿ ಸೆಟ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಪಿನಾಕ” ಚಿತ್ರಕ್ಕೆ ಚಿತ್ರೀಕರಣ .

ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಈ ಚಿತ್ರಕ್ಕೆ ಧನಂಜಯ್ ನಿರ್ದೇಶನ .

ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ಅವರು ಅದ್ದೂರಿಯಾಗಿ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ಧನಂಜಯ್ ಚೊಚ್ಚಲ ನಿರ್ದೇಶನದ ಹಾಗೂ ಗೋಲ್ಟನ್ ಸ್ಟಾರ್ ಗಣೇಶ್‍ ಅಭಿನಯದ ‘ಪಿನಾಕ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನೆಲಮಂಗಲ ಬಳಿ ಚಿತ್ರಕ್ಕಾಗಿ ಆರು ಎಕರೆ ಪ್ರದೇಶದಲ್ಲಿ ದೊಡ್ಡ ಸೆಟ್‍ ಹಾಕಲಾಗಿದೆ. ಸೆಟ್‍ ಎಂದರೆ ಅದು 500 ವರ್ಷಗಳ ಹಿಂದಿನ ದೇವಗಿರಿ ಎಂಬ ಸಾಮ್ರಾಜ್ಯದ ಸೆಟ್‍. ಒಂದು ನಗರವನ್ನೇ ನಿರ್ಮಿಸಲಾಗಿದ್ದು, ಮಧ್ಯದಲ್ಲೊಂದು ಅರ್ಧನಾರೀಶ್ವರನ ಪ್ರತಿಮೆ ನಿಲ್ಲಿಸಲಾಗಿದೆ.

ಇಲ್ಲಿ ಕಳೆದ 32 ದಿನಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಇನ್ನೂ 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. ಈ ಸೆಟ್ ಚಿತ್ರದಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ, ಚಿತ್ರತಂಡ ಈ ಸೆಟ್‍ ಹೇಗಿದೆ ಎಂದು ಗೌಪ್ಯವಾಗಿಟ್ಟಿದೆ. ಚಿತ್ರಂಡದವರು ಮತ್ತು ಚಿತ್ರಕ್ಕೆ ಸಂಬಂಧಪಟ್ಟವರನ್ನು ಹೊರತುಪಡಿಸಿದರೆ, ಇಲ್ಲಿ ಹೊರಗಿನವರಿಗೆ ಸುಲಭವಾಗಿ ಪ್ರವೇಶವಿಲ್ಲ. ಮಾಧ್ಯಮದವರಿಗೆ ಇಡೀ ನಗರವನ್ನು ಪರಿಚಯ ಮಾಡಿಕೊಟ್ಟ ನಂತರ ನಿರ್ದೇಶಕ ಧನಂಜಯ್‍ ಚಿತ್ರತಂಡದವರ ಜೊತೆಗೆ ಮಾತಿಗೆ ಕುಳಿತರು.

‘ಮಳೆ, ಬಿಸಿಲು, ಗಾಳಿಯ ನಡುವೆ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಮಾಡುತ್ತಿದ್ದೇವೆ. ಅದಕ್ಕೂ ಮುನ್ನ ಎರಡು ತಿಂಗಳ ಕಾಲ ಸೆಟ್‍ ನಿರ್ಮಾಣದ ಕೆಲಸ ನಡೆದಿದೆ. ಸಂತೋಷ್‍ ಪಾಂಚಲ ಮತ್ತು ತಂಡದವರು ಈ ಸೆಟ್‍ ನಿರ್ಮಿಸಿದ್ದಾರೆ. ಯುದ್ಧ ನಡೆದ ನಂತರದ ದೃಶ್ಯಗಳನ್ನು ಇಂದು ಚಿತ್ರೀಕರಣ ಮಾಡಿದ್ದೇವೆ. ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ 800 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಚಿತ್ರೀಕರಣ ಮಾಡಿ, ಹೈದರಾಬಾದ್‍ಗೆ ಫುಟೇಜ್‍ ಕಳಿಸುತ್ತಿದ್ದೇವೆ. ಅಲ್ಲಿ ಗ್ರಾಫಿಕ್ಸ್ ಕೆಲಸ ಸತತವಾಗಿ ನಡೆಯುತ್ತಿದೆ’ ಎಂದು ಮಾಹಿತಿ ಕೊಟ್ಟರು.

ಪಿನಾಕ’ ಎಂದರೆ ಒಬ್ಬ ರಕ್ಷಕ ಎನ್ನುವ ಅವರು, ‘ಇದೊಂದು ಕಾವಲುಗಾರ ಪರಂಪರೆಯ ಕುರಿತಾದ ಚಿತ್ರ. ಮುಂದಿನ ವರ್ಷ ಈ ಚಿತ್ರವನ್ನು ತೆರೆಗೆ ಬರಲಿದೆ. ಇದು ಒತ್ತಡದಲ್ಲಿ ಮಾಡುವ ಕೆಲಸವಲ್ಲ. ಒಂದೊಂದು ಸಣ್ಣ ದೃಶ್ಯಕ್ಕೂ ಸಾಕಷ್ಟು ಸಮಯವಾಗುತ್ತಿದೆ. ಗಣೇಶ್‍ ಜೊತೆಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರ ಜೊತೆಗೊಂದು ಒಳ್ಳೆಯ ಸಂಬಂಧ ಇದೆ. ಅವರೊಂದಿಗೆ ಕೆಲಸ ಮಾಡುವುದು ಖುಷಿಯ ವಿಚಾರ. ಈ ಚಿತ್ರಕ್ಕೆ ಅವರ ಸಹಕಾರ ದೊಡ್ಡದು. ಇನ್ನು ನಿರ್ಮಾಪಕರು ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದಾರೆ, ಇದು ನನ್ನೊಬ್ಬನ ಚಿತ್ರವಲ್ಲ. ಇದೊಂದು ತಂಡದ ಚಿತ್ರ’ ಎಂದರು ನಿರ್ದೇಶಕ ಧನಂಜಯ್.

ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ವಿಜಯಾ ಮಾತನಾಡಿ, ‘ಗಣೇಶ್‍ ಜೊತೆಗೆ ಚಿತ್ರ ಮಾಡಬೇಕು ಎಂಬುದು ನನ್ನ ಸಹೋದರನ (ವಿಶ್ವಪ್ರಸಾದ್‍) ಆಸೆಯಾಗಿತ್ತು. ಅವರ ಜೊತೆಗೆ ಚಿತ್ರ ಮಾಡಬೇಕು ಎಂದು ನಿರ್ಧಾರವಾದಾಗ, ಕಥೆ ಸಹ ಇರಲಿಲ್ಲ. ಗಣೇಶ್‍ ಅವರಿಗೆ ಎಂಥಾ ಚಿತ್ರ ಮಾಡಬೇಕು ಎಂದು ಯೋಚಿಸಿ, ಒಂದು ವಿಭಿನ್ನ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.ತಮ್ಮ ನಿರ್ಮಾಣ ಸಂಸ್ಥೆಯು ಫ್ಯಾಕ್ಟರಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಅವರು, ‘ಕಳೆದ ಏಳು ವರ್ಷಗಳಲ್ಲಿ ನಮ್ಮ ಸಂಸ್ಥೆಯಿಂದ 50 ಚಿತ್ರಗಳು ತಯಾರಾಗಿವೆ. ಈ ಪೈಕಿ 43 ಬಿಡುಗಡೆಯಾದರೆ, ಏಳು ಚಿತ್ರಗಳು ಬಿಡುಗಡೆ ಆಗುವುದಕ್ಕೆ ತಯಾರಿ ನಡೆಸಿವೆ. 20 ಚಿತ್ರಗಳು ಬೇರೆಬೇರೆ ಹಂತಗಳಲ್ಲಿದೆ.

ಈ ಚಿತ್ರದಲ್ಲಿನ ರಾಜಗುರುವಿನ ಪಾತ್ರಕ್ಕೆ ಶ್ರೀನಿವಾಸಮೂರ್ತಿ ಅವರೇ ಬೇಕು ಎಂದು ಗಣೇಶ್‍ ಪಟ್ಟುಹಿಡಿದರಂತೆ. ಈ ಕುರಿತು ಮಾತನಾಡಿದ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು, ‘’ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಂತರ ಗಣೇಶ್‍ ಜೊತೆಗೆ ಬಾಂಧವ್ಯ ಗಟ್ಟಿಯಾಗಿದೆ. ಈ ಚಿತ್ರವನ್ನು ನೀವೇ ಮಾಡಬೇಕು ಎಂದು ಅವರು ಹೇಳಿದರು.ಈ ಚಿತ್ರವು ಬೇರೆಯದೇ ಲೆವೆಲ್‍ನಲ್ಲಿದೆ’ ಎಂದರು.

ಬರುವಾಗಲೇ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂಬ ತೀರ್ಮಾನದೊಂದಿಗೆ ನಿರ್ಮಾಪಕರು ಬಂದರು ಎಂದ ನಾಯಕ ಗಣೇಶ್, ‘ಈ ತರಹದ ಪಾತ್ರವನ್ನು ನನ್ನಿಂದ ಮಾಡಿಸಬಹುದು ಎಂದು ಮಾಡಿಸುತ್ತಿದ್ದಾರೆ. ಪ್ರತಿ ದೃಶ್ಯದಲ್ಲೂ ನಿರ್ಮಾಪಕರು ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಿ ಎರಡು ದಿನಗಳಲ್ಲೇ ನಿರ್ಮಾಪಕಿ ವಿಜಯಮ್ಮ ಕಿರುಚಾಡುತ್ತಿದ್ದರು. ಏನು ಎಂದು ಕೇಳಿದಾಗ, ಬರೀ 600 ಜ್ಯೂನಿಯರ್ ಕಲಾವಿದರು ಮಾತ್ರ ಬಂದಿದ್ದಾರೆ, 800 ಜನ ಬರಬೇಕಿತ್ತು ಎಂದರು. ಕಡಿಮೆಯಾದರೆ ಹಣ ಉಳಿಯುತ್ತದೆ ಎಂದು ಖುಷಿಪಡಬೇಕು. ಆದರೆ, ಅವರು ಹಾಗಲ್ಲ. ಈ ಸೆಟ್‍ ಈ ಮಟ್ಟಕ್ಕೆ ಬರಬೇಕೆಂದರೆ ಅವರು ಮತ್ತು ನಿರ್ದೇಶಕ ಧನಂಜಯ್‍ ಕಾರಣ. ನಾಲ್ಕೈದು ತಿಂಗಳು ನಿಂತು ಸೆಟ್‍ ಹಾಕಿಸಿದ್ದಾರೆ. ಧನು ಮೊದಲ ಚಿತ್ರದಲ್ಲೇ ಇಂಥದ್ದೊಂದು ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಅವರು ಹೇಗೆ ಮಾಡಬಹುದು ಎಂಬ ಪ್ರಶ್ನೆ ನನಗೂ ಇತ್ತು. ಆದರೆ, ಇಲ್ಲಿ ನೂರಕ್ಕೆ ನೂರು ತೆಗೆದಿದ್ದಾನೆ. ಪ್ರತಿ ದಿನ ಸೆಟ್‍ನಲ್ಲಿ ನಾಲ್ಕು ಕ್ಯಾಮೆರಾಳಿವೆ. 32 ದಿನಗಳಲ್ಲಿ 64 ದಿನಗಳ ಕೆಲಸವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು, ‘ಬಹಳ ಖುಷಿಕೊಟ್ಟ ಪಾತ್ರವಿದು. ನನಗೆ ಖುಷಿಕೊಟ್ಟರೆ ಪ್ರೇಕ್ಷಕರಿಗೂ ಖುಷಿಯಾಗುತ್ತದೆ ಎಂದು ನಂಬಿದವನು ನಾನು. ಇದು ಬೇರೆ ತರಹದ ಸಿನಿಮಾ. ನನ್ನ ಚಿತ್ರಜೀವನದಲ್ಲಿ ವಿಭಿನ್ನವಾದ ಸಿನಿಮಾ ಎಂದು ಹೇಳಿದರು. ಅದನ್ನು ನಿಜವಾಗಿಸಲು ಸಂಪೂರ್ಣವಾಗಿ ಪ್ರಯತ್ನ ಮಾಡುತ್ತೇನೆ’. ಇನ್ನೂ, ನನ್ನ ಕನ್ನಡದ ಸಂಭಾಷಣೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ವಿಶೇಷವಾಗಿ “ಭೋಜರಾಜ”ರಿಂದ ನನ್ನ ಕನ್ನಡದ ಮಾತಿಗೆ ಮೆಚ್ಚುಗೆ ದೊರಕಿದ್ದು ಖುಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ನಟ
ಹೊನ್ನವಳ್ಳಿ ಕೃಷ್ಣ, ರವೀಂದ್ರನಾಥ್‍, ಛಾಯಾಗ್ರಾಹಕ ಕರಮ್‍ ಚಾವ್ಲಾ ಮುಂತಾದವರು ಹಾಜರಿದ್ದರು.

Similar Posts

  • “ಕಾಣೆಯಾಗಿದ್ದಾಳೆ” ಹುಡುಕಿಕೊಟ್ಟವರಿಗೆ ಬಹುಮಾನ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆ.

    ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಕೆ ನಿರ್ದೇಶಿಸಿರುವ“ಕಾಣೆಯಾಗಿದ್ದಾಳೆ” ಹುಡುಕಿಕೊಟ್ಟವರಿಗೆ ಬಹುಮಾನ ಚತ್ರ ತೆರೆಗೆ ಬರಲು ಸಿದ್ದವಾಗಿದ್ದು, ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಇತ್ತೀಚಿಗೆ ಈ ಚಿತ್ರದ ಹಾಡೊಂದನ್ನು ದಾವಣಗೆರೆ ಮಹಾನಗರ ಪಾಲಿಕೆಯ ಉಪ ಮೇಯರ್ ಯೋಗೇಶ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು‌. ಇದೊಂದು ನೈಜ ಹಾಗೂ ಕಾಲ್ಪನಿಕ ಕಥಾ ಆಧಾರಿತ ಚಿತ್ರ. ಸಾಮಾಜಿಕ ಜಾಲತಾಣಗಳನ್ನು ಹೆಣ್ಣುಮಕ್ಕಳು ನಿಯಮಿತವಾಗಿ ಬಳಸಬೇಕು. ಇಲ್ಲದಿದ್ದರೆ ಅಪಾಯ ಖಂಡಿತ ಎಂಬ ವಿಷಯವನ್ನು…

  • ರಣಬೀರ್‌ ಕಪೂರ್‌, ಯಶ್‌, ಸಾಯಿ ಪಲ್ಲವಿ ನಟನೆಯ ರಾಮಾಯಣ ಚಿತ್ರದಿಂದ ಬಿಗ್‌ ಅಪ್‌ಡೇಟ್‌

    ಜುಲೈ 24ರಂದು ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಚಿತ್ರದ ಪ್ಯಾನ್‌ ವರ್ಲ್ಡ್‌ ಟ್ರೇಲರ್‌ ಬಿಡುಗಡೆ ನವದೆಹಲಿಯಲ್ಲಿ ಜುಲೈ 18 ರಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ, ಭಾರತದ ಅಪ್ರತಿಮ ಸಾಂಸ್ಕೃತಿಕ ಪರಂಪರೆಯಾದ ರಾಮಾಯಣವನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ಐತಿಹಾಸಿಕ ಪ್ರಯಾಣಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ಈ ಪಯಣದ ಆರಂಭವನ್ನು ‘ಪ್ರಥಮ ಸಂಕಲ್ಪ’ ಎಂದು ಕರೆಯಲಾಗಿದ್ದು, ಇದು ಭಾರತೀಯ ಸಂಪ್ರದಾಯದಂತೆ ಮಹತ್ಕಾರ್ಯವೊಂದಕ್ಕೆ ಕೈಹಾಕುವ ಮುನ್ನ ಕೈಗೊಳ್ಳುವ ದೃಢ ನಿರ್ಧಾರವಾಗಿದೆ. ಜುಲೈ 24 ರಂದು ನಡೆಯಲಿರುವ ಈ ಚಿತ್ರದ ಜಾಗತಿಕ ಟ್ರೇಲರ್…

  • “X&Y” ಚಿತ್ರದ “ಆoಬು ಆಟೋ ” ಎಂಬ ಆಪ್ತಮಿತ್ರ.

    ಇನ್ನೇನು ಬಿಡುಗಡೆಯ ಅoಚಿಗೆ ಬoದಿರುವ ಕನ್ನಡದ “X&Y” ಚಿತ್ರದಲ್ಲಿ  ಆಟೋರಿಕ್ಷಾ “ಆಂಬು ಆಟೋ ” ಆಗಿ ಬಡ್ತಿ ಪಡೆದು ಎಲ್ಲರ ಗಮನ ಸೆಳೆದಿದೆ.  ಆಂಬುಲೆನ್ಸ್ ನಲ್ಲಿರುವoತೆ ಎಲ್ಲ ಸೌಲಭ್ಯಗಳನ್ನು ಈ ಆಟೋದಲ್ಲಿ ಅಳವಡಿಸಿ ಚಿತ್ರದಲ್ಲಿ ಅದನ್ನೊಂದು ಕಲಾವಿದನೆoಬಂತೆ ಕಲಾತ್ಮಕವಾಗಿ ಬಳಸಲಾಗಿದೆ. ಈ ವಿಷಯ ತಿಳಿದ ಆಟೋ ಚಾಲಕರು ಗುಂಪು-ಗುಂಪಾಗಿ, ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಅವರನ್ನು ಖುದ್ದು ಭೇಟಿ ಮಾಡಿ, ‘ಸರ್ ಇಲ್ಲಿತನಕ ‘ಆಟೋರಿಕ್ಷಾ’ ನಮ್ಮ ‘ಮಿತ್ರ’ನಾಗಿತ್ತು. ಈಗದನ್ನು ‘ಆಂಬು ಆಟೋ’ ಆಗಿ ಪರಿವರ್ತಿಸಿ ಎಲ್ಲರ ‘ಆಪ್ತಮಿತ್ರ’ನಾಗಿರುವಂತೆ ಮಾಡಿದ್ದೀರಿ…

  • ‘ತಾಯವ್ವ’ ನಟಿ ಗೀತಪ್ರಿಯ ಈಗ ‘ಅಪರಿಚಿತೆ’

    ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಸಾಥ್ ನೀಡಿದ ಶಾಸಕ ಸಿ.ಎನ್. ಅಶ್ವಥ್ ನಾರಾಯಣ ಈ ಮೊದಲು ‘ತಾಯವ್ವ’ ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಚಿತ್ರದ ಹೆಸರು ‘ಅಪರಿಚಿತೆ’. ಹೌದು ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ, ಶಾಸಕ ಸಿ.ಎನ್. ಅಶ್ವಥ್ ನಾರಾಯಣ ‘ಅಪರಿಚಿತ’ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ, ‘ಸಿನಿಮಾ ಪವರ್ ಫುಲ್ ಮೀಡಿಯಾ. ಸಾಮಾಜಿಕ ಸಂದೇಶ ಇರುವ ಇಂತ ಸಿನಿಮಾ ಹೆಚ್ಚಾಗಿ ಬರಬೇಕು. ಆಗ…

  • ಪ್ರಥಮ್ ಅಭಿನಯದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರಕ್ಕೆ ಚಾಲನೆ .

    “ಬಿಗ್ ಬಾಸ್” ಮೂಲಕ ಜನಪ್ರಿಯರಾದ ನಟ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ, ಪಿ.ವಿ.ಆರ್ ಸ್ವಾಮಿ ಗೂಗಾರದೊಡ್ಡಿ ನಿರ್ದೇಶನದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಹಿರಿಯನಟ ಶ್ರೀನಿವಾಸಮೂರ್ತಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. “ಫಸ್ಟ್ ನೈಟ್ ವಿತ್ ದೆವ್ವ” ಹಾರಾರ್ ವಿತ್ ಕಾಮಿಡಿ ಜಾನರ್ ನ ಚಿತ್ರ ಎಂದು ಮಾತನಾಡಿದ ನಾಯಕ ಪ್ರಥಮ್, ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ….

  • ದುಬೈ ನಲ್ಲಿ “ಜಸ್ಟ್ ಪಾಸ್”.

    ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರದ ಟೀಸರ್ ಡಿಸೆಂಬರ್ 10ರಂದು ದುಬೈನಲ್ಲಿ ನಡೆಯಲಿರುವ “ದುಬೈ ದಸರಾ” ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ನಾಡಿನ ಹೆಸರಾಂತ ಕಲಾವಿದರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಾವಿರಾರು ಕನ್ನಡಿಗರ ಸಮ್ಮುಖದಲ್ಲಿ “ಜಸ್ಟ್ ಪಾಸ್” ಚಿತ್ರದ ಟೀಸರ್ ಪ್ರದರ್ಶನವಾಗಲಿದೆ. ಡಿಸೆಂಬರ್‌ 13‌ ರಂದು ಈ ಚಿತ್ರದ ಟೀಸರ್ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ. ಶ್ರೀ, ಪ್ರಣತಿ, ರಂಗಾಯಣರಘು…

0 0 votes
Article Rating
Subscribe
Notify of
guest
0 Comments
Oldest
Newest Most Voted