PRESS RELEASE: Kannada and English. ಪತ್ರಿಕಾ ಪ್ರಕಟಣೆ: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ 2025

ಶಿವ ರಾಜಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ; ದುನಿಯಾ ವಿಜಯ್ ಅತ್ಯುತ್ತಮ ನಿರ್ದೇಶಕ, ಗಣೇಶ್ ಅತ್ಯುತ್ತಮ ನಟ

ಬೆಂಗಳೂರು ಮೇ 11: ಕನ್ನಡದ ಸೂಪರ್‌ಸ್ಟಾರ್ ಶಿವ ರಾಜಕುಮಾರ್ ಅವರಿಗೆ ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ 2025 ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರಿಗೆ ಟ್ರೋಫಿ, ಹಂಸಲೇಖ ಅವರ ಐದನಿ ಸಂಸ್ಥೆಯಿಂದ ಚಿನ್ನದ ಪದಕ ಮತ್ತು ಸನ್ಮಾನ ಪತ್ರವನ್ನು ನೀಡಲಾಯಿತು. ಪ್ರಶಸ್ತಿಗಳ ಆರನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಮೊದಲ ಬಾರಿಗೆ ಕೊಡಲಾಗಿದೆ.

2024 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳ ಇತರ ಪ್ರಮುಖ ವಿಜೇತರಲ್ಲಿ ಆಕ್ಷನ್ ಸ್ಟಾರ್ ‘ದುನಿಯಾ’ ವಿಜಯ್ ಅವರು ತಮ್ಮ ‘ಭೀಮ’ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ. ‘ಗೋಲ್ಡನ್ ಸ್ಟಾರ್’ ಗಣೇಶ್ ಅವರು ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು. ‘ಮರ್ಫಿ’ ಚಿತ್ರಕ್ಕಾಗಿ ರೋಶನಿ ಪ್ರಕಾಶ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪೃಥ್ವಿ ಕೋಣನೂರು ನಿರ್ದೇಶನದ ‘ಹದಿನೇಳೆಂಟು’ ಚಿತ್ರವನ್ನು ವಿಮರ್ಶಕರು 2024ರ ಅತ್ಯುತ್ತಮ ಚಿತ್ರವೆಂದು ನಿರ್ಣಯಿಸಿದ್ದಾರೆ.

ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಇಬ್ಬರು ನಟಿಯರು ಹಂಚಿಕೊಂಡಿದ್ದಾರೆ; ‘ಭೈರಾದೇವಿ’ ಚಿತ್ರಕ್ಕಾಗಿ ಅನು ಪ್ರಭಾಕರ್ ಮತ್ತು ‘ಹದಿನೆಂಟೆಂದು’ ಚಿತ್ರಕ್ಕಾಗಿ ರೇಖಾ ಕೂಡ್ಲಗಿ. ಸಂಗೀತ ವಿಭಾಗದಲ್ಲಿ, ಚರಣ್ ರಾಜ್ ‘ಭೀಮ’ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದರೆ, ರವಿ ಬಸ್ರೂರ್ ‘ಭೈರತಿ ರಣಗಲ್’ ಚಿತ್ರಕ್ಕಾಗಿ ಅತ್ಯುತ್ತಮ ಹಿನ್ನೆಲೆ ಸಂಗೀತ (BGM) ಪ್ರಶಸ್ತಿಯನ್ನು ಪಡೆದರು.

ಒಟ್ಟು 29 ಪ್ರಶಸ್ತಿಗಳನ್ನು ಐದು ವಿವಿಧ ವಿಭಾಗಗಳಲ್ಲಿ ನೀಡಲಾಯಿತು; ಚೊಚ್ಚಲ ಪ್ರಶಸ್ತಿಗಳು, ತಾಂತ್ರಿಕ ಪ್ರಶಸ್ತಿಗಳು, ಸಂಗೀತ ಪ್ರಶಸ್ತಿಗಳು, ನಟನೆ ಮತ್ತು ನಿರ್ದೇಶನ ಪ್ರಶಸ್ತಿಗಳು ಮತ್ತು ವಿಶೇಷ ತೀರ್ಪುಗಾರರ ಪ್ರಶಸ್ತಿಗಳು. ಹಿರಿಯ ಸಂಗೀತ ಸಂಯೋಜಕ ಹಂಸಲೇಖ, ಹಿರಿಯ ನಿರ್ದೇಶಕರಾದ ನಾಗಾಭರಣ, ನಟಿ ಸುಮನ್ ನಗರ್ಕರ್ ಮತ್ತು ಪದ್ಮಶ್ರೀ ಪುರಸ್ಕೃತ ಡಾ.ಕಾಮಿನಿ ರಾವ್ ಸೇರಿದಂತೆ ಇತರ ಗಣ್ಯರು ಪ್ರಶಸ್ತಿಗಳನ್ನು ವಿತರಿಸಿದರು.

ಚೊಚ್ಚಲ ವಿಭಾಗಗಳಲ್ಲಿ ಗಮನಾರ್ಹ ವಿಜೇತರಲ್ಲಿ ಸಮರ್ಜಿತ್ ಲಂಕೇಶ್ ಅವರು ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಪಡೆದರೆ, ಉತ್ಸವ್ ಗೊನ್ವರ್ ಅವರು ‘ಫೋಟೋ’ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments