ಮಲ್ಲೇಪುರಂ ಜಿ ವೆಂಕಟೇಶ್ ಅವರಿಂದ ಬಹು ನಿರೀಕ್ಷಿತ “ತಮಟೆ” ಚಿತ್ರದ ಟೀಸರ್ ಹಾಗೂ ಹಾಡಿನ ಅನಾವರಣ. ಮದನ್ ಪಟೇಲ್ ಅಭಿನಯದ, ಮಯೂರ್ ಪಟೇಲ್ ನಿರ್ದೇಶನದ ಈ ಚಿತ್ರ ನವೆಂಬರ್ 29 ರಂದು ಬಿಡುಗಡೆ.

ವಂದನ್ ಎಂ ನಿರ್ಮಾಣದ, ಮಯೂರ್ ಪಟೇಲ್ ಚೊಚ್ಚಲ ನಿರ್ದೇಶನದ ಹಾಗೂ ಮದನ್ ಪಟೇಲ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ತಮಟೆ” ಚಿತ್ರದ ಟೀಸರ್ ಹಾಗೂ ಹಾಡನ್ನು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಮೊದಲ ಕುಲಪತಿಗಳಾದ ಮಲ್ಲೇಪುರಂ ಜಿ ವೆಂಕಟೇಶ್ ಬಿಡುಗಡೆ ಮಾಡಿದರು. ದಿನಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮದನ್ ಪಟೇಲ್ ಅವರು ನನ್ನ ಬಹುಕಾಲದ ಗೆಳೆಯರು. ಅವರು ಬರೆದಿರುವ “ತಮಟೆ” ಕಾದಂಬರಿ ಇಂದು ಸಿನಿಮಾ ರೂಪ ಪಡೆದುಕೊಂಡಿದೆ. ಮಯೂರ್ ಪಟೇಲ್ ಅವರು ನಿರ್ದೇಶಿಸಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಮದನ್ ಪಟೇಲ್ ಅವರೆ ಅಭಿನಯಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಹಾಗೂ ಟೀಸರ್ ತುಂಬಾ ಚೆನ್ನಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಈ ಚಿತ್ರ ನವೆಂಬರ್ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು ಮಲ್ಲೇಪುರಂ ಜಿ ವೆಂಕಟೇಶ್.

“ತಮಟೆ” ವಾದ್ಯಗಾರನೊಬ್ಬನ ಜೀವನಾಧಾರಿತ ಈ ಸಿನಿಮಾದಲ್ಲಿ ನಾನೇ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ.‌ ನನ್ನ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರೊಂದಿಗೆ ಸಂಗೀತವನ್ನು ನೀಡಿದ್ದೇನೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಪ್ರಶಂಸೆ ಪಡೆದ “ತಮಟೆ” ಚಿತ್ರ ನವೆಂಬರ್ 29 ರಾಜ್ಯಾದ್ಯಂತ ನವೆಂಬರ್ 29ರಂದು ಬಿಡುಗಡೆಯಾಗುತ್ತಿದೆ. ಇಂದು ಟೀಸರ್ ಹಾಗೂ ಬಿಡುಗಡೆ ಮಾಡಿಕೊಟ್ಯ ಮಲ್ಲೇಪುರಂ ಜಿ ವೆಂಕಟೇಶ್ ಅವರಿಗೆ ಧನ್ಯವಾದ. ಮಯೂರ್ ಪಟೇಲ್ ಅವರು ದುಬೈ ರಾಜ್ ಕಪ್ ಪಂದ್ಯಾವಳಿಯಲ್ಲಿ ಭಾಗಿಯಾಗಿರುವುದರಿಂದ ಇಂದಿನ ಸಮಾರಂಭದಲ್ಲಿ ಅವರು ಉಪಸ್ಥಿತರಿಲ್ಲ ಎಂದು ತಿಳಿಸಿದ ಮದನ್ ಪಟೇಲ್ ಅವರು ಚಿತ್ರರಂಗಕ್ಕೆ ಇಂದು ಅವಶ್ಯಕತೆಯಿರುವ ಹಲವಾರು ವಿಷಯಗಳ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿರುವುದಾಗಿ ಹೇಳಿದರು.

ಈ ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ. ಒಳ್ಳೆಯ ಪಾತ್ರ ನೀಡಿದ ಮದನ್ ಪಟೇಲ್ ಅವರಿಗೆ ಧನ್ಯವಾದ ಎಂದರು ನಟಿ ತೇಜಸ್ವಿನಿ. ಅತಿಥಿಗಳಾಗಿ ಆಗಮಿಸಿದ್ದ ದಿನಕರ್ ಅವರು ಸಹ ಚಿತ್ರಕ್ಕೆ ಯಶಸ್ವಿಯಾಗಲೆಂದು ಹಾರೈಸಿದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments