ನೋಡುಗರಿಗೆ ಮನೋರಂಜನೆಯ ರಸದೌತಣ ಸಿಗುವುದು ಖಂಡಿತ .
ಕುಟುಂಬ ಸಮೇತ ನೋಡಬಹುದಾದ ಉತ್ತಮ ಚಿತ್ರ “ಜಸ್ಟ್ ಪಾಸ್”
ಚಿತ್ರ: ಜಸ್ಟ್ ಪಾಸ್
ನಿರ್ದೇಶನ: ಕೆ.ಎಂ. ರಘು
ನಿರ್ಮಾಣ: ಕೆ.ವಿ. ಶಶಿಧರ್
ತಾರಾಗಣ: ಶ್ರೀ, ಪ್ರಣತಿ, ರಂಗಾಯಣ ರಘು, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಹನುಮಂತೇಗೌಡ, ಪ್ರಕಾಶ್ ತುಮ್ಮಿನಾಡು ಮುಂತಾದವರು
ಅದು “ಜಸ್ಟ್ ಪಾಸ್” ಆದವರಿಗಾಗಿಯೇ ಇರುವ ಕಾಲೇಜು . ಕಾಲೇಜು ಸ್ಟೋರಿ ಅಂದ ತಕ್ಷಣ ಬರೀ ವಿದ್ಯಾರ್ಥಿಗಳ ತರಲೆ, ತುಂಟಾಟ ಮಾತ್ರ ಈ ಚಿತ್ರದಲ್ಲಿಲ್ಲ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವ ಪ್ರಯತ್ನವನ್ನು ನಿರ್ದೇಶಕ ಕೆ.ಎಂ.ರಘು ಮಾಡಿದ್ದಾರೆ.
ಹೆಚ್ಚು ಅಂಕ ಪಡೆದವರಿಗೆ ಅನೇಕ ಕಾಲೇಜುಗಳಿದೆ. ಆದರೆ “ಜಸ್ಟ್ ಪಾಸ್” ಆದವರಿಗೆ ಒಂದು ಕಾಲೇಜು ಆ ಊರಿನಲ್ಲಿ ಆರಂಭವಾಗುತ್ತದೆ. ಅಲ್ಲಿಗೆ ಒಂದಷ್ಟು ಜನ ಹುಡುಗರು ಬಂದು ಸೇರುತ್ತಾರೆ. ಆ ಕಾಲೇಜು ಸುತ್ತ ಕಥೆ ಸಾಗುತ್ತದೆ. ವಿದ್ಯಾರ್ಥಿಗಳ ತುಂಟಾಟ, ತರಲೆ, ತಮಾಷೆಗಳು ನೋಡುಗರಿಗೆ ಮನೋರಂಜನೆಯ ರಸದೌತಣ ನೀಡುತ್ತದೆ. ಈ ರೀತಿ ಕಥೆ ಸಾಗುತ್ತಿರುವಾಗ ಚಿತ್ರ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಕಡಿಮೆ ಅಂಕ ಪಡೆದವರನ್ನು ಉತ್ತೇಜಿಸುವ ಸದ್ದುದ್ದೇಶದಿಂದ ಶುರುವಾದ ಈ ಕಾಲೇಜನ್ನು ಮುಚ್ಚಿಸುವ ಪ್ರಯತ್ನ ಕೆಲವರಿಂದ ನಡೆಯುತ್ತದೆ. ಕಾಲೇಜ್ ಅನ್ನು ಉಳಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಒಟ್ಟಗಿ ಹೋರಾಡುತ್ತಾರೆ. ಒಟ್ಟಿನಲ್ಲಿ ವಿದ್ಯಾರ್ಥಿ ಜೀವನ ನಡೆಸುತ್ತಿರುವವರಿಗೆ, ಅದನ್ನು ಅನುಭವಿಸಿದವರಿಗೆ “ಜಸ್ಟ್ ಪಾಸ್” ನಿಜಕ್ಕೂ ಮೆಚ್ಚುಗೆಯಾಗುತ್ತದೆ.
ಲವಲವಿಕೆಯ ಹುಡುಗನಾಗಿ ನಾಯಕ ಶ್ರೀ ಇಷ್ಟವಾಗುತ್ತಾರೆ. ನಾಯಕಿ ಪ್ರಣತಿ ಅವರ ನಟನೆ ಮೂಲಕ ಗಮನ ಸೆಳೆಯುತ್ತಾರೆ.
ರಂಗಾಯಣ ರಘು, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಹನುಮಂತೇಗೌಡ, ಪ್ರಕಾಶ್ ತುಮ್ಮಿನಾಡು ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿದ್ದು, ಎಲ್ಲರ ಪಾತ್ರಗಳು ಉತ್ತಮವಾಗಿದೆ. ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಅಚ್ಚುಕಟ್ಟಾಗಿದೆ.