ನ್ಯೂ ಇಯರ್ ಗೆ ಬಂತು “ಮ್ಯಾಟ್ನಿ” ಚಿತ್ರದ ಮಾಸ್ ಹಾಡು . ನೀನಾಸಂ ಸತೀಶ್ – ರಚಿತಾರಾಮ್ ಜೋಡಿಯ ಈ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದ ಡಾಲಿ ಧನಂಜಯ .

ನೀನಾಸಂ ಸತೀಶ್ ಹಾಗೂ ರಚಿತಾರಾಮ್ “ಅಯೋಗ್ಯ” ಚಿತ್ರದ ನಂತರ ನಟಿಸಿರುವ ಚಿತ್ರ “ಮ್ಯಾಟ್ನಿ”. ಬಹು ನಿರೀಕ್ಷಿತ ಈ ಚಿತ್ರದ ” ಬಾರೋ ಬಾರೋ ಬಾಟಲ್ ತಾರೋ” ಎಂಬ ಹಾಡು ನ್ಯೂ ಇಯರ್ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ, ನೀನಾಸಂ ಸತೀಶ್ ಹಾಗೂ ರೀಲ್ ರೀನಾ ಹಾಡಿದ್ದಾರೆ. ಯುವಪೀಳಿಗೆಗೆ ಹೇಳಿಮಾಡಿಸಿದಂತಿರುವ ಈ ಹಾಡಿಗೆ ನೀನಾಸಂ ಸತೀಶ್, ನಾಗಾಭೂಷಣ್ ಹಾಗೂ ಶಿವರಾಜ್ ಕೆ.ಆರ್ ಪೇಟೆ ಹೆಜ್ಜೆ ಹಾಕಿದ್ದಾರೆ. ಹೊಸವರ್ಷದ ಹರುಷವನ್ನು ಹೆಚ್ಚಿಸುವ ಈ ಹಾಡಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.

F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಾರ್ವತಿ ಎಸ್ ಗೌಡ ನಿರ್ಮಿಸಿರುವ, ಮನೋಹರ್ ಕಾಂಪಲ್ಲಿ ನಿರ್ದೇಶನದ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಮ್ಯಾಟ್ನಿ” ಚಿತ್ರಕ್ಕಿದೆ. ನೀನಾಸಂ ಸತೀಶ್, ರಚಿತಾ ರಾಮ್, ಅದಿತಿ ಪ್ರಭುದೇವ, ನಾಗಭೂಷಣ, ಶಿವರಾಜ ಕೆ.ಆರ್ ಪೇಟೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments