ಚಿತ್ರಸಂತೆಯಲ್ಲಿ ಬಿಡುಗಡೆಯಾಯಿತು ನಿರಂಜನ್ ಶೆಟ್ಟಿ ಅಭಿನಯದ “31 DAYS” ಚಿತ್ರದ ಫಸ್ಟ್ ಲುಕ್ .

“ಜಾಲಿಡೇಸ್” ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ “31 DAYS” ಚಿತ್ರದ ಫಸ್ಟ್ ಲುಕ್ ಇತ್ತೀಚಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಅನಾವರಣವಾಯಿತು.

“31 DAYS” ಚಿತ್ರಕ್ಕೆ “ಹೈ ವೋಲ್ಟೇಜ್ ಲವ್ ಸ್ಟೋರಿ” ಎಂಬ ಅಡಿಬರಹವಿದೆ. ಇದೊಂದು ಪ್ರೇಮ ಕಥಾನಕವಾಗಿದ್ದು, ಚಿತ್ರಸಂತೆಗೆ ಆಗಮಿಸಿದ್ದ 46 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ದಂಪತಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ವಿಶೇಷ. ಶೀರ್ಷಿಕೆಯನ್ನು ಯುವ ಪ್ರೇಮಿಗಳು ಬಿಡುಗಡೆ ಮಾಡಿದರು. ಅಲ್ಲಿ ನೆರದಿದ್ದ ಸಹಸ್ರಾರು ಕಲಾಸಕ್ತರು “31 DAYS” ಚಿತ್ರದ ವಿನೂತನ ಫಸ್ಟ್ ಲುಕ್ ಗೆ ಫಿದಾ ಆದರು.

“ನಾನು ಸಹ ಚಿತ್ರಕಲಾ ಪರಿಷತ್ ನ ವಿದ್ಯಾರ್ಥಿಯಾಗಿದ್ದು, ಚಿತ್ರಸಂತೆಯಲ್ಲಿ ನಮ್ಮ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆಯಾಗಿದ್ದು ಖುಷಿಯಾಗಿದೆ ಎನ್ನುತ್ತಾರೆ ನಾಯಕ ನಿರಂಜನ್ ಶೆಟ್ಟಿ.

Nstar ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ಅವರು ನಿರ್ಮಿಸುತ್ತಿರುವ “31DAYS” ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶಿಸುತ್ತಿದ್ದಾರೆ. “31 DAYS” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಹೆಬ್ರಿ, ಆಗುಂಬೆ, ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ನಿರಂಜನ್ ಶೆಟ್ಟಿ ಅವರು ನಾಯಕನಾಗಿ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸುತ್ತಿದ್ದಾರೆ.

“31 DAYS” ಚಿತ್ರ ಪ್ರಸ್ತುತ ಜನರೇಷನ್ ನಲ್ಲಿ ನಡೆಯುವ ಒಂದು ಸುಂದರ love story ಆಗಿದ್ದು 31 ದಿನಗಳಲ್ಲಿ ನಡೆಯುವ high voltage love story ಇದಾಗಿದೆ.

4 ಹಾಡುಗಳಿರುವ ಈ ಚಿತ್ರಕ್ಕೆ ವಿ. ಮನೋಹರ್ ರವರ ಸಂಗೀತ ನಿರ್ದೇಶನವಿದೆ. ಇದು ವಿ.ಮನೋಹರ್ ಅವರ ಸಂಗೀತ ನಿರ್ದೇಶನದ 150 ನೇ ಚಿತ್ರವೂ ಹೌದು. ವಿನುತ್. K ಛಾಯಾಗ್ರಹಣ, ಧನು ಕುಮಾರ್ ನೃತ್ಯ ನಿರ್ದೇಶನ ಹಾಗೂ ಸನತ್ ರವರ ಸಂಕಲನ ಈ ಚಿತ್ರಕ್ಕಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments