108 ಗಣಪನ ದರ್ಶನ‌ ಪಡೆದ “ಮಿ.ರಾಣಿ” . ನಿರ್ದೇಶಕ ಮಧುಚಂದ್ರ ಅವರಿಂದ ನೂತನ ಪ್ರಚಾರಕ್ಕೆ ನಾಂದಿ .

“ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಚಿತ್ರದ ನಿರ್ದೇಶಕ ಮಧುಚಂದ್ರ ತಮ್ಮ ಚಿತ್ರಗಳಲ್ಲಿ ಸಮಾಜಕ್ಕೆ ಒಂದೊಳ್ಳೆ ‌ಸಂದೇಶ ನೀಡುತ್ತಾ ಬಂದಿದ್ದಾರೆ. ಪ್ರಸ್ತುತ ಮಧುಚಂದ್ರ ಅವರು “ಮಿ.ರಾಣಿ” ಎಂಬ ವಿಭಿನ್ನ ಕಾಮಿಡಿ ಜಾನರ್ ನ ಚಿತ್ರ ನಿರ್ದೇಶಿಸಿದ್ದಾರೆ .

“ಲಕ್ಷ್ಮೀ ನಿವಾಸ” ಧಾರಾವಾಹಿಯಲ್ಲಿ ಜಯಂತ ಪಾತ್ರದ ಮೂಲಕ‌ ಜನಮನ ಗೆದ್ದಿರುವ ದೀಪಕ್ ಸುಬ್ರಹ್ಮಣ್ಯ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪ್ರಚಾರಕಾರ್ಯದಲ್ಲಿ ಭಾಗಿಯಾಗಿದೆ. ಪ್ರಚಾರದ ಮೊದಲೇ ಹೆಜ್ಜೆಯಾಗಿ ನಿರ್ದೇಶಕ ಮಧುಚಂದ್ರ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದ್ದಾರೆ. ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ನಟ ದೀಪಕ್ ಸುಬ್ರಹ್ಮಣ್ಯ ಅವರಿಗೆ ಸಹಸ್ರಾರು ಅಭಿಮಾನಿಗಳಿದ್ದಾರೆ.

ಆ ಪೈಕಿ 108 ಜನ ಅಭಿಮಾನಿಗಳ ಮನೆಗೆ “ಮಿ.ರಾಣಿ” ಚಿತ್ರತಂಡ ಭೇಟಿ ನೀಡಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ದರ್ಶನ ಪಡೆದು, ಅವರ ಮೂಲಕ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಿದ್ದಾರೆ. ಈ ವಿನೂತನ ಪ್ರಚಾರಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕಿದೆ.

108 ಜನರ ಮನೆಗೆ ಭೇಟಿ ನೀಡಿದಾಗ ಅವರು ತೋರಿದ ಪ್ರೀತೆಗೆ ಮನತುಂಬಿ ಬಂದಿದೆ ಎಂದು ತಿಳಿಸಿರುವ “ಮಿ.ರಾಣಿ” ಚಿತ್ರತಂಡ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ‌.

ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ಪ್ರಯತ್ನ ನಡೆಯುತ್ತಿದೆ. ದೀಪಕ್ ಸುಬ್ರಹ್ಮಣ್ಯ ಅವರಿಗೆ ನಾಯಕಿಯಾಗಿ ಪಾರ್ವತಿ ನಾಯರ್ ನಟಿಸಿದ್ದಾರೆ. ಶ್ರೀವತ್ಸ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

EXCEL ORBIT CREATIONS. ಲಾಂಛನದಲ್ಲಿ ನೂರಕ್ಕೂ ಹೆಚ್ಚು ಜನರು ಬಂಡಾವಳ ಹೂಡಿ ನಿರ್ಮಿಸಿರುವ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ರವೀಂದ್ರನಾಥ್ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಅವರ ಸಂಕಲನಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments