ಪ್ರಣಂ ದೇವರಾಜ್ ಅಭಿನಯದ “S\O ಮುತ್ತಣ್ಣ” ಚಿತ್ರದ ಹಾಡನ್ನು ಹಾಡುವುದರ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಖ್ಯಾತ ಗಾಯಕಿ ದೀಪ್ತಿ ಸುರೇಶ್

ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S\O ಮುತ್ತಣ್ಣ” ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ “ಕರೆದರೆ ಹಾಗೆಲಾ ಬರಲಾರೆ ನಾನು” ಎಂಬ ಹಾಡನ್ನು ತಮಿಳು ಹಾಗೂ ಹಿಂದಿ ಚಿತ್ರಗಳ ಪ್ರಸಿದ್ದ ಗೀತೆಗಳನ್ನು ಹಾಡಿ ಜನಪ್ರಿಯರಾಗಿರುವ ಗಾಯಕಿ ದೀಪ್ತಿ ಸುರೇಶ್ ಹಾಡಿದ್ದಾರೆ. ಈ ಹಾಡನ್ನು ಹಾಡುವ ಮೂಲಕ ದೀಪ್ತಿ ಸುರೇಶ್ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

“ಮಾಮನ್ನನ್”, “ಬೇಬಿ ಜಾನ್”, ” ಮಾರಾ”, “ಜವಾನ್”, “ವೆಟ್ಟೈಯನ್” ಮುಂತಾದ ಚಿತ್ರಗಳ ಹಾಡುಗಳನ್ನು ತಮ್ಮದೇ ಆದ ವಿಶಿಷ್ಟವಾದ ಧ್ವನಿಯ ಮೂಲಕ ಹಾಡುವುದರೊಂದಿಗೆ ದೀಪ್ತಿ ಸುರೇಶ್ ಕೇಳುಗರ ಮನ ಗೆದ್ದಿದ್ದಾರೆ. ಅದರಲ್ಲೂ ಉದಯನಿಧಿ ಸ್ಟಾಲಿನ್ ಅಭಿನಯದ “ಮಾಮನ್ನನ್” ಚಿತ್ರದ “ಕೊಡಿ ಪರಕುರ ಕಾಲಂ” ಹಾಗೂ ರಜನಿಕಾಂತ್ ಅಭಿನಯದ “ವೆಟ್ಟೈಯನ್” ಚಿತ್ರದ “ಮನಸಿಲಾಯೊ” ಹಾಡುಗಳಂತೂ ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ “S/O ಮುತ್ತಣ್ಣ” ಚಿತ್ರದ ಈ ಹಾಡು ಸಹ ದೀಪ್ತಿ ಸುರೇಶ್ ಅವರ ಗಾಯನದಲ್ಲಿ ಉತ್ತಮವಾಗಿ ಮೂಡಿಬಂದಿದೆ. ಸದ್ಯದಲ್ಲೇ ಈ ಹಾಡು A2 music ಮೂಲಕ ಅನಾವರಣವಾಗಲಿದೆ.

ತಂದೆ – ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಕ್ತಾಯವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಜಾಕ್ ಮಂಜು ಅವರ ನೇತೃತ್ವದ ಶಾಲಿನಿ‌ ಆರ್ಟ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡಲಿದೆ.

ಪುರಾತನ ಫಿಲಂಸ್ ನಿರ್ಮಾಣ ಮಾಡಿರುವ ಸಿನಿಮಾಗೆ ಎಸ್ ಅರ್ ಕೆ ಫಿಲಂಸ್ ಸಾಥ್ ನೀಡಿದೆ‌.

ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ “ದಿಯಾ” ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments