ಆರ್‌ಸಿವಿ ಟಾಕೀಸ್

ಕನ್ನಡ ಚಿತ್ರರಂಗದ ಪ್ರತಿಷ್ಠಿತ ಪ್ರಚಾರ ಸಂಸ್ಥೆಯಾದ ಶ್ರೀ ರಾಘವೇಂದ್ರ ಚಿತ್ರವಾಣಿ, ಕಳೆದ ನಾಲ್ಕೂವರೆ ದಶಕಗಳಿಂದ ಸಿನಿಮಾ ಪ್ರಚಾರ ಮಾಡುತ್ತಾ ಬಂದಿರುವುದಷ್ಟೇ ಅಲ್ಲ, ಚಂದನವನದ ಅತ್ಯಂತ ಬೇಡಿಕೆಯ ಪ್ರಚಾರ ಸಂಸ್ಥೆಯಾಗಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಇದುವರೆಗೂ 2500ಕ್ಕೂ ಹೆಚ್ಚು ಚಿತ್ರಗಳ ಪ್ರಚಾರ ಕಾರ್ಯವನ್ನು ಕೈಗೊಂಡಿದೆ. ಸಿನಿಮಾ ಪ್ರಚಾರ ಜೊತೆಗೆ, ಚಿತ್ರರಂಗಕ್ಕಾಗಿ ದುಡಿದ ಹಲವು ಸಾಧಕರನ್ನು ಕಳೆದ ಹಲವು ವರ್ಷಗಳಿಂದ ಗೌರವಿಸುತ್ತಾ ಬಂದಿದೆ.

ಆರ್‌ಸಿವಿ ಟಾಕೀಸ್‌ಗೆ ಸ್ವಾಗತ

ನಾವು ಯಾರು?

1976ರಲ್ಲಿ ಬಿಡುಗಡೆಯಾದ ಡಾ. ವಿಷ್ಣುವರ್ಧನ್ ಮತ್ತು ಮಂಜುಳಾ ಅಭಿನಯದ ‘ಸೊಸೆ ತಂದ ಸೌಭಾಗ್ಯ’ ಚಿತ್ರದ ಮೂಲಕ ಪ್ರಚಾರಕರ್ತರಾಗುವುದರ ಜೊತೆಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಹುಟ್ಟುಹಾಕಿದ ಸುಧೀಂದ್ರ, ಅಲ್ಲಿಂದ ಇಲ್ಲಿಯವರೆಗೂ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪ್ರಚಾರಕರ್ತರಾಗಿದ್ದಾರೆ.

ಬರೀ ಪ್ರಚಾರಕರ್ತರಷ್ಟೇ ಅಲ್ಲ, ನಿರ್ಮಾಣದಲ್ಲೂ ಗುರುತಿಸಿಕೊಂಡ ಡಿ.ವಿ. ಸುಧೀಂದ್ರ, ‘ಒಲವಿನ ಉಡುಗೊರೆ’, ‘ಗುಂಡನ ಮದುವೆ’, ‘ಗಣೇಶನ ಮದುವೆ’, ‘ನಗಗುನಗುತಾ ನಲಿ’, ‘ಪಟ್ಟಣಕ್ಕೆ ಬಂದ ಪುಟ್ಟ’ ಮುಂತಾದ ಚಿತ್ರಗಳನ್ನು ಸ್ವತಂತ್ರವಾಗಿ ಮತ್ತು ಇನ್ನಿತರ ಕೆಲವು ನಿರ್ಮಾಪಕರ ಸಹಯೋಗದೊಂದಿಗೆ ಚಿತ್ರಗಳನ್ನು ನಿರ್ಮಿಸಿದರು. ಅವರ ಈ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ, ಪ್ರಚಾರ ರಾಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳ ಜೊತೆಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ‘ಕವನ ಹಂಸ’ ಎಂಬ ಬಿರುದು ಸಹ ಸಿಕ್ಕಿದೆ.

Years of Exp
0 +
CLIENTS
0 +
MOVIES
0 +

ಡಿ.ವಿ. ಸುಧೀಂದ್ರ ಅವರ ನಿಧನದ ನಂತರ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್, ಡಿ.ಜಿ. ವಾಸುದೇವ ಮತ್ತು ಸುಧೀಂದ್ರ ಅವರ ಮಗ ಸುನೀಲ್ ಮುನ್ನಡೆಸುತ್ತಿದ್ದು, ಈ ಪೈಕಿ 2006ರಿಂದ ಇಲ್ಲಿಯವರೆಗೂ ಸುಧೀಂದ್ರ ವೆಂಕಟೇಶ್, ‘ಮುಂಗಾರು ಮಳೆ’, ‘ದುನಿಯಾ’, ‘ಕೆಜಿಎಫ್’, ‘ಕಾಂತಾರ’ ಸೇರಿದಂತೆ 1200ಕ್ಕೂ ಹೆಚ್ಚು ಚಿತ್ರಗಳಿಗೆ ಪ್ರಚಾರಕರ್ತರಾಗಿ ಕೆಲಸ ಮಾಡಿದ್ದಾರೆ. ಕಳೆದ ಮೂರೂವರೆ ದಶಕಗಳಿಂದ ಪ್ರಚಾರಕರ್ತರಾಗಿ ಕೆಲಸ ಮಾಡುತ್ತಿರುವ ಸುಧೀಂದ್ರ ವೆಂಕಟೇಶ್, ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪ್ರಚಾರಕರ್ತರಾಗಿ ಗುರುತಿಸಿಕೊಂಡಿರುವುದು ವಿಶೇಷ.

ಹೊಂಬಾಳೆ ಫಿಲಂಸ್, ರಾಕ್ಲೈನ್ ಪ್ರೊಡಕ್ಷನ್ಸ್, ಜಯಣ್ಣ ಕಂಬೈನ್ಸ್, ಶೈಲೇಂದ್ರ ಪ್ರೊಡಕ್ಷನ್ಸ್, ಪುಷ್ಕರ್ ಫಿಲಂಸ್, ಪರಂವಾ ಸ್ಟುಡಿಯೋಸ್, ಕಿಚ್ಚ ಕ್ರಿಯೇಷನ್ಸ್, ತೂಗುದೀಪ ಪ್ರೊಡಕ್ಷನ್ಸ್, ಉಪೇಂದ್ರ ಪ್ರೊಡಕ್ಷನ್ಸ್, ಎಸ್.ವಿ. ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್, ಸಂದೇಶ್ ಪ್ರೊಡಕ್ಷನ್ಸ್ ಸೇರಿದಂತೆ ಕನ್ನಡ ಚಿತ್ರರಂಗದ ಕೆಲವು ಜನಪ್ರಿಯ ನಿರ್ಮಾಣ ಸಂಸ್ಥೆಗಳಿಗೆ ಖಾಯಂ ಪ್ರಚಾರಕರ್ತರಾಗಿ ಗುರುತಿಸಿಕೊಂಡಿರುವ ಶ್ರೀ ರಾಘವೇಂದ್ರ ಚಿತ್ರವಾಣಿಯು ಇತ್ತೀಚಿನ ವಷ್ಗಳಲ್ಲಿ ಕನ್ನಡದಿಂದ ಬಿಡುಗಡೆಯಾದ ಕೆಲವು ಜನಪ್ರಿಯ ಪ್ಯಾನ್ ಇಂಡಿಯಾ ಚಿತ್ರಗಳ ಪ್ರಚಾರದ ಕೆಲಸಗಳನ್ನು ನಿರ್ವಹಿಸಿದೆ. ‘ಕೆಜಿಎಫ್’, ‘ಕಬ್ಜ’, ‘777 ಚಾರ್ಲಿ’, ‘ಈಗ’, ಸೈರಾ ನರಸಿಂಹ ರೆಡ್ಡಿ’, ‘ನೋಟ’, ‘ಡಿಯರ್ ಕಾಮ್ರರೇಡ್’ ಮುಂತಾದ ಹಲವು ಪ್ಯಾನ್ ಇಂಡಿಯಾ ಚಿತ್ರಗಳಿಗೆ ಪ್ರಚಾರ ಕೆಲಸವನ್ನು ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ನಿರ್ವಹಿಸಿದೆ.

ಆರಂಭಗಳು

ಸುಧೀಂದ್ರ ವೆಂಕಟೇಶ್ ಅವರು ಸಿನಿಮಾ ಪ್ರಚಾರ ಕಾರ್ಯಗಳಿಗಾಗಿ 2006 ರಿಂದ 1,200 ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.

ಜನಪ್ರಿಯ ಚಲನಚಿತ್ರಗಳು

ಮುಂಗಾರು ಮಳೆ (2006) ಮತ್ತು ಧುನಿಯಾ (2007) ಚಲನಚಿತ್ರಗಳು ಅವರ ಸೇವೆಗಳಿಗಾಗಿ ಅವರಿಗೆ ದೊಡ್ಡ ಮನ್ನಣೆಯನ್ನು ತಂದುಕೊಟ್ಟವು ಮತ್ತು ಸ್ವತಂತ್ರ ಚಲನಚಿತ್ರ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೆಲೆಗೊಳ್ಳಲು ಸಹಾಯ ಮಾಡಿತು.

PRO ಪ್ರಯಾಣ

ಉದ್ಯಮದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಅವರು 2007 ಮತ್ತು 2021 ರ ನಡುವೆ ಸುಮಾರು 2,000 ಚಲನಚಿತ್ರಗಳಿಗೆ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದರು

ರೋಮಾಂಚಕ ಪೋರ್ಟ್ಫೋಲಿಯೊ

ಉದ್ಯಮದಲ್ಲಿ 35 ವರ್ಷಗಳ ಅನುಭವದೊಂದಿಗೆ, 52 ವರ್ಷದ ತನಗಾಗಿ ಒಂದು ಗೂಡು ಕೆತ್ತಿದ್ದಾರೆ. ಪ್ರಸ್ತುತ, ಸುಧೀಂದ್ರ ವೆಂಕಟೇಶ್ ಅವರು ಪ್ಯಾನ್ (ಪ್ರೆಸೆನ್ಸ್ ಅಕ್ರಾಸ್ ನೇಷನ್) ಭಾರತದ ಚಲನಚಿತ್ರಗಳಿಗಾಗಿ ತೊಡಗಿಸಿಕೊಂಡಿದ್ದಾರೆ. ವಿ ಸುಧೀಂದ್ರ ಅವರು ಪ್ರತಿ ವರ್ಷ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸಮಾರಂಭವನ್ನು ಪ್ರಾರಂಭಿಸಿದರು. ಪ್ರತಿಭಾವಂತರನ್ನು ಗುರುತಿಸಲು ಅವರು ಐದು ವರ್ಷಗಳ ಅವಧಿಗೆ ಕಾರ್ಯಕ್ರಮಗಳನ್ನು ನಡೆಸಿದರು. ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.

Movies

Awards

Clients

ಚಲನಚಿತ್ರ ಲೋಕದ ದಿನಚರಿ

Load More